wordpressdaya
| Forum role | Member since | Last activity | Topics created | Replies created |
|---|---|---|---|---|
| Member | Nov 4, 2008 (17 years) |
- | 1 | 0 |
- Forum role
- Member
- Member since
Nov 4, 2008 (17 years)
- Last activity
- -
- Topics created
- 1
- Replies created
- 0
Bio
ಜಕ್ಕೂ ಆಶ್ಚರ್ಯ ಆಗ್ತ ಇದೆ. ಈ technology ಜೊತೆಗೆ ನಾವು ಹೋಗ್ತಾ ಇರೋ ಸ್ಪೀಡು ಅದು ನಮ್ಮನ್ನು ಆವರಿಸುತ್ತಿರುವ ರೀತಿ, ಎಲ್ಲವೂ ಅಧ್ಬುತ ಅಂತ ಅನ್ನಿಸ್ತ ಇದೆ. ನಾನು ತಡಕಾಡುತ ಇದ್ದೆ... ಕನ್ನಡ ಬ್ಲಾಗ್ ಬರೆಯುವುದು ಹೇಗೆ...ಅಂತ. ಕೊನೆಗೂ ನನಗೆ ಉತ್ತರ ಸಿಕ್ಕಿದೆ ಮತ್ತು ನಾನು ನಿಧಾನವಾಗಿ ಬರೆಯುವುದಕ್ಕೆ ಶುರು ಮಾಡುತ್ತಾ ಇದ್ದೀನಿ.
ನಾನೊಬ್ಬ ಅಂತಹ ಬರಹಗಾರನೂ ಅಲ್ಲ ಅಥವ ಬರೆದು ಗುರುತಿಸಿಕೊಂಡು ಖ್ಯಾತಿ ಪಡೆಯುವ ಖಯಾಲಿಯೂ ನನಗಿಲ್ಲ. ನಿಮಗೆ ಸಮಯ ಸಿಕ್ಕಾಗ ನಿಮ್ಮ ಪಕ್ಕದ ಮನೆಯ ಆತ್ಮೀಯನೂ ಅಲ್ಲದ ಅಥವ ಅಪರಿಚಿತನೂ ಅಲ್ಲದ ವ್ಯಕ್ತಿಯೊಡನೆ ಸುಮ್ಮನೆ ಮಾತಾಡುವ ಅನುಭವವನ್ನು ನಿಮಗೆ ಕಟ್ಟಿಕೊಡುವ ಪ್ರಯತ್ನ ಮಾಡಬಲ್ಲೆ.
ನನಗೆ ಬರೆಯುವದಕ್ಕಿಂತ ಓದುವುದು ತುಂಬ ಇಷ್ಠ. ಆದರೆ ವೃತ್ತಿಯ ಜೊತೆ ಜೊತೆಗೆ ಪ್ರವೃತ್ತಿಯನ್ನು ಬೆಳೆಸುವ ಹಂಬಲದಿಂದ ಏನಾದರು ಮಾಡುವುದಕ್ಕೆ ಆಸೆಪಟ್ಟು, ಏನನ್ನು ಮಾಡಲು ತೋಚದೆ ಸುಮ್ಮನೆ ಗೊಂದಲಕ್ಕೊಳಗಾಗಿ ಯೋಚಿಸುವದನ್ನೇ ಬಿಟ್ಟು, ಒಂಥರಾ ಸೋಮಾರಿಯ ಸುಖಕ್ಕೆ ಒಗ್ಗಿ ಹೋಗಿದ್ದೇನೆ!
ಒಮ್ಮೊಮ್ಮೆ ಅನಿಸುತ್ತದೆ...ಸುತ್ತಲಿನ ಕ್ರಿಯೆಗಳಿಗೆ ಪ್ರತಿಕ್ರಿಯಿಸೋಣ, ನನ್ನ ಶಕ್ತಿ, ಸಾಮರ್ಥ್ಯವನ್ನು ಉಪಯೋಗಿಸಿ ಲಾಭದ ಅಪೇಕ್ಷೆ ಇಲ್ಲದೆ ಏನನ್ನಾದರು ಮಾಡಬೇಕು...ಹಾಗೆ ಹೀಗೆ ಎಂದು... ಆದರೆ, ಮುಕ್ತ ಮನಸ್ಸಿನಿಂದ, ಗೊಂದಲಕ್ಕೀಡಗದೆ ಬದುಕುವುದೇ ಒಂದು ಸವಾಲಾಗಿರುವಾಗ, ಏನು ಮಾಡಲು ಸಾಧ್ಯ ಎಂಬ ನಿರಾಶೆ ಕಾಡುತ್ತದೆ.
ಬರೆಯುವಲ್ಲಿಯೂ ಕೂಡ ಗೊಂದಲಗಳು... :-) ಏನನ್ನು ಬರೆಯಲಿ, ಯಾಕೆ ಬರೆಯಲಿ ಎಂದು. ಕಾರಣವಿಲ್ಲದೆ, ಅರಿವಿಲ್ಲದೆ ಇತತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನ ಕೂಡ. ಸುಮ್ಮನೆ ಬರೆಯುತ್ತಾ ಸಾಗುತ್ತೇನೆ. ಇಷ್ಟವಾದರೆ, ತಿರುಗಿ ನಿಮ್ಮ ಪ್ರತಿಕ್ರಿಯೆ ತಿಳಿಸಿ..ಇಷ್ಟವಿಲ್ಲದಿದ್ದರೂ ಕೂಡ ನಿಮ್ಮ ಪ್ರತಿಕ್ರಿಯೆ ತಿಳಿಸಿ. ಸಾಗೋಣ. ಒಟ್ಟಿಗೆ...ಕಾರಣವಿಲ್ಲದೆ!
ಇಂತಿ ನಿಮ್ಮ ಪ್ರೀತಿಯ
ದಯಾ